ಪುನೀತ್ ರಾಜ್‍ಕುಮಾರ್ ಓಕೆ ಅಂದಿದ್ದಕ್ಕೆ ರೋಷನ್ ಅವರನ್ನು ಮದುವೆಯಾದೆ; ಅನುಶ್ರೀ

 | 
Anushree

ವೀಕ್ಷಕರೆ ಇತ್ತೀಚೆಗಷ್ಟೇ ಅನುಶ್ರೀ ಹಾಗೂ ರೋಷನ್ ಅವರ ಮದುವೆ ಸಮಾರಂಭ ನಡೆಯಿತು, ಈ ಇಬ್ಬರ ನಡುವೆ ಪ್ರೀತಿ ಚಿಗುರೋಕೆ ಮುಖ್ಯ ಕಾರಣ ಪುನೀತ್ ರಾಜ್‍ಕುಮಾರ್ ಎಂಬುವುದು ಇದೀಗ ಸ್ವತಃ ಅನುಶ್ರೀ ಅವರೇ ಒಪ್ಪಿಕೊಂಡಿದ್ದಾರೆ.

ಪುನೀತ್ ರಾಜ್‍ಕುಮಾರ್ ಅವರ ಆಪ್ತ ಸ್ನೇಹಿತ ರೋಷನ್ ಅವರು ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದಾರೆ. ಜೊತೆಗೆ ಸಿನಿಮಾ‌ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಇನ್ನು ಸುಮಾರು 5 ವರ್ಷಗಳ ಹಿಂದೆ ಪುನೀತ್ ರಾಜ್‍ಕುಮಾರ್ ಅವರ ಜೊತೆ ನಿಂತಿದ್ದ ರೋಷನ್ ಅವರನ್ನು ಕಂಡ ಅನುಶ್ರೀ ಅವರು ಪರಿಚಯ ಮಾಡಿಕೊಂಡಿದ್ದರು.

ತದನಂತರದಲ್ಲಿ ಅಪ್ಪು ಅವರ ಸ್ನೇಹಿತ ಅಂತ ಸ್ವಲ್ಪ ಜಾಸ್ತಿನೇ ಮಾತುಕತೆ ಮುಂದುವರಿಸಿದ ಈ ಜೋಡಿ, ತದನಂತರ ಪುನೀತ್ ರಾಜ್‍ಕುಮಾರ್ ಅವರ ಬಳಿ ಈ ಜೋಡಿ ಮದುವೆ ಬಗ್ಗೆ ಪ್ರಸ್ತಾಪ ಮಾಡಿರುವ ವಿಚಾರವನ್ನು ಮದುವೆ ಬಳಿಕ ಮಾಧ್ಯಮಗಳ ಜೊತೆ ಅನುಶ್ರೀ ಹೆಳಿಕೊಂಡಿದ್ದಾರೆ.

ಒಟ್ಟಾರೆಯಾಗಿ ಅನುಶ್ರೀ ಹಾಗೂ ರೋಷನ್ ಮದುವೆಗೆ ಮುಖ್ಯ ಕಾರಣಕರ್ತರಾಗಿದ್ದು ನಮ್ಮೆಲ್ಲರ ನೆಚ್ಚಿನ ಪುನೀತ್ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಒಪ್ಪಿಕೊಂಡಿದ್ದಕ್ಕೆ ಮದುವೆ ಆಗಿದ್ದು.. ಅಪ್ಪು ಮಾತಿಗೆ ಇಲ್ಲ ಎನ್ನುವ ಮನಸ್ಸು ನನ್ನದಲ್ಲ ಎಂದು ಅನುಶ್ರೀ ಅವರು ಹೇಳಿಕೊಂಡರು. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ವಿಡಿಯೋ ನೋಡಿ

Tags


Around the web