ಹುಟ್ಟುವ ಮೊದಲೇ ಅವಳಿ ಮಕ್ಕಳ ಹೆಸರು ರಿವೀಲ್ ಮಾಡಿದ ನಟಿ ಭಾವನಾ ರಾಮಣ್ಣ, ಏನದು ಗೊತ್ತಾ

ಖ್ಯಾತ ನಟಿ ಹಾಗೂ ಭರತನಾಟ್ಯ ಕಲಾವಿದೆ ಭಾವನಾ ರಾಮಣ್ಣ ಸಖತ್ ಖುಷಿಯಲ್ಲಿದ್ದಾರೆ. ತಮ್ಮ 40ನೇ ವಯಸ್ಸಿನಲ್ಲಿ ಐವಿಎಫ್ ಮೂಲಕ ಗರ್ಭ ಧರಿಸಿದ್ದಾರೆ. ಮದುವೆಯಾಗದೆ, ವೀರ್ಯ ದಾನ ಪಡೆದು ಅವಳಿ ಮಕ್ಕಳಿಗೆ ಭಾವನಾ ರಾಮಣ್ಣ ಗರ್ಭಿಣಿ ಆಗಿದ್ದಾರೆ.
ಮೊನ್ನೆಯಷ್ಟೇ ನಟಿ ಭಾವನಾ ರಾಮಣ್ಣ ಅವರ ಮನೆಯಲ್ಲಿ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. ಒಂಟಿಯಾಗಿ ತಾಯಿಯಾಗುವ ತೀರ್ಮಾನ ತೆಗೆದುಕೊಂಡಿರೋ ಭಾವನಾ ಅವರು ಸದ್ಯ ತುಂಬು ಗರ್ಭಿಣಿಯಾಗಿದ್ದಾರೆ.
ನಟಿ ಭಾವನಾ ಅವರಿಗೆ ಇನ್ನೂ ಮದುವೆಯಾಗಿಲ್ಲ. ಆದ್ರೆ, ಮದುವೆಯಾಗದೇ ತಾಯಿಯಾಗಬೇಕೆಂಬ ಹಂಬಲ ಭಾವನಾ ಅವರಲ್ಲಿತ್ತು. ಹೀಗಾಗಿ ಐವಿಎಫ್ ಇನ್ ವಿಟ್ರೊ ಫಲೀಕರಣ ಎಂದರೆ ಪ್ರಯೋಗಾಲಯದಲ್ಲಿ ಮೊಟ್ಟೆ ಮತ್ತು ವೀರ್ಯವನ್ನು ಸಂಯೋಜಿಸುವ ಮೂಲಕ ಗರ್ಭಧರಿಸಲು ಸಹಾಯ ಮಾಡುವ ಒಂದು ಚಿಕಿತ್ಸೆಯಾಗಿದೆ. ಈ ಮೂಲಕ ನಟಿ ಸದ್ಯ ಆರು ತಿಂಗಳ ಗರ್ಭಿಣಿಯಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ.
ಇನ್ನೂ, ಭಾವನಾ ಅವರು ತಮಗೆ ಹುಟ್ಟುವ ಮಗುವಿಗೆ ಹೆಸರು ಏನು ಇಡಬೇಕು ಎಂದು ನಿಗದಿ ಮಾಡಿದ್ದಾರೆ. ಹೆಣ್ಣು ಮಗು ಹುಟ್ಟಿದರೇ ರುಕ್ಮಿಣಿ ಅಂತ ಇಡುತ್ತೇನೆ ಎಂದಿದ್ದಾರೆ. ಮಕ್ಕಳಿಗೆ ಏನೆಂದು ಹೆಸರು ಇಡುವಿರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಭಾವನಾ ಅವರು, ಈಗ ಹೆಣ್ಣು ಮಗುವಿನ ಹೆಸರನ್ನು ಮಾತ್ರ ಯೋಚನೆ ಮಾಡಿದ್ದೇನೆ. ಆಕೆಗೆ ನನ್ನ ಅಮ್ಮನ ಅಮ್ಮ ಅಂದ್ರೆ ಅಜ್ಜಿಯ ಹೆಸರಾಗಿರುವ ರುಕ್ಮಿಣಿ ಇಡಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ. ಆದರೆ ಗಂಡು ಮಗುವಿನ ಹೆಸರನ್ನು ಇನ್ನೂ ಯೋಚಿಸಿಲ್ಲ ಎಂದಿದ್ದಾರೆ.